ಶಿಸ್ತು ಬೇಕೆ ಕವಿತೆಗೆ?
ಶಬ್ದದ ಕಾಲಿಗೆ ಅರ್ಥದ ಮುಳ್ಳು
ಕುಂಟೊ ಶಬ್ದ, ಕುಣಿಯೊ ಅರ್ಥ
ಅಸ್ತ ವ್ಯಸ್ತ ಲೋಕದಲ್ಲಿ ಶಿಸ್ತು ಬೇಕೆ ಕವಿತೆಗೆ?
ಶಬ್ದ ತತ್ತರಿಸುವಾಗ, ತೊದಲುವಾಗ,
ತಡೆ ತಡೆದು ನುಡಿವಾಗ
ಅರ್ಥ ಹೊತ್ತ ಮಾತ ಮೈ ತೂರಾಡುತ್ತದೆ,
ಎಡವಿ ತಡವರಿಸಿ ನಡೆಯುತ್ತದೆ
ಕವಿತೆಯೋ ಶಬ್ದದ ಅರ್ಥದ ಹಂಗು
ತೊರೆದು
ಶಬ್ದಾರ್ಥವ ಮೀರಿದ ಮೋಹಕ್ಕೆ ವಶವಾಗುತ್ತದೆ.
ಹೆಕ್ಕಿದ ಪದಗಳು ಚಲ್ಲಾಪಿಲ್ಲಿ ಚಲ್ಲಿ ಹೋಗಿ
ಕಟ್ಟುವುದಕ್ಕೆ ಕವಿತೆ ಕೈಗೇ ಸಿಕ್ಕದಾಗಿ…
ಮೋಹ ಮತ್ತಿನ್ನೇನು? ಮೋಹಿದಷ್ಟೂ
ಮತ್ತಷ್ಟು ಗುನಃ ಮಾಡಿಸುತ್ತಾ…
ಕಡಿವಾಣಗಳ ಕಳಚುತ್ತ, ಸಂಕೋಲೆಗಳ ಸೀಳುತ್ತ…
ಪದ ಪದ ಮುನ್ನಡೆದ ಹಾಗೇ
ಚಲ್ಲಿ ಹೋದಲ್ಲೆಲ್ಲಾ ಹೂಬಿಟ್ಟ ಪದಗಳು
ಕೈತುಂಬ ಮೈ ತುಂಬ…
ಕವಿತೆ ಕಟ್ಟುವ ನಶೆ
ಸಾಲುಗಳು ಒಂದರಹಿಂದೊಂದು
ತೂಗಾಡುತ್ತ ತಾರಾಡುತ್ತ ಅಮಲೇರಿ…
ಶಬ್ದದ, ಅರ್ಥದ, ಮೋಹದ
ಮೆಲುಕಹಾಕುತ್ತಿರುವಾಗ
ಶಿಸ್ತು ಬೇಕೆ ಕವಿತೆಗೆ?
ಈ ಅಸ್ತ ವ್ಯಸ್ತ ಲೋಕದಲ್ಲಿ?
Does a Poem Need Order?
The word’s feet pricked by meaning
Limps, and the meaning prances madly
In this chaotic world, does a poem need order?
As the word stutters and stammers
And speaks hesitatingly
Speech clad in meaning throws its weight around
But the poem unbridled to the high horse of meaning
Stumbles on nonetheless
And is imprisoned by the passion for
That which transcends meaning.
When words picked up carefully splatter and scatter
And the nebulous poem floats out of reach…
What else can this passion be? The more impassioned
The word, the more it sins
Shrugging off bridles, splitting fetters
As word after word walk ahead
Flowers bloom up from where they fall
And the whole body is filled with the
Intoxication of stringing them together into a poem,
As line after line swing and sway drunkenly
Ruminating over words, meanings, and passion
Does the poem need order
In this chaotic world?
(Translation from the Kannada: Maithreyi Karnoor).
ಮನೆ
ಈ ಮನೆಯಲ್ಲಿ ನಾನು ಒಬ್ಬಳೆ
ಆ ಕೋಣೆಯಲಿ ಕೂತು
ಈ ಕೋಣೆಯಲಿ ನಿಂತು
ಅಂಗಳದ ತುಂಬ ಅಡ್ಡಾಡಿಕೊಂಡು
ಹೀಗೆ ಮನೆತುಂಬಾ ತುಂಬಿಕೊಂಡಿದ್ದೇನೆ.
ಅಡಿಗೆಮನೆಯಲಿ ಹಸಿವು
ಹಚ್ಚಿದರೆ ಒಲೆ,
ಧಗಧಗ ಉರಿದು ಕುದ್ದು ಬೆಂದು ಉಕ್ಕುತ್ತದೆ ತವಕ
ಶವರಿನಲಿ ಸಿಂಕಿನಲಿ ನಲ್ಲಿಗಳಲ್ಲಿ
ಸುರಿಯುವುದಕ್ಕೇ ಕಾದಿರುವ ನೀರು.
ನೆನಪುಗಳ ಜೀಕಿದರೆ
ಕಾಲದಾಚೆಗೂ ತೂಗೊ ಉಯ್ಯಾಲೆ
ಕಪಾಟಿನ ರಾಶಿ ಪುಸ್ತಕಗಳಲ್ಲಿ
ಬರೀ ಅಕ್ಷರಗಳು
ಹೊರಚೆಲ್ಲದೆ ಕೂತಿವೆ ಹಾಗೇ
ಹಾಳೆಗಂಟಿಕೊಂಡು
ನಿಃಶಬ್ದದಲ್ಲಿ ಏನೆಲ್ಲ ಶಬ್ದಗಳು.
ಇದೆಂಥ ಒಂಟಿತನ?
ಒಂಟಿಯಾಗಿರಲಿಕ್ಕೇ ಬಿಡದ್ದು?
ಬೆನ್ನಿಗಂಟಿದ ಮೌನ ಹಾಡುತ್ತದೆ, ಮಾತಾಡುತ್ತದೆ,
ಕನಸನುಣಿಸುತ್ತದೆ, ಸುಮ್ಮನೆ ಜೊತೆಗಿರುತ್ತದೆ.
ಮಲಗಿದರೆ ರಾತ್ರಿ ಎದ್ದರೆ ಹಗಲು
ಕಳೆದು ಹೋಗುವುದು ಹೊತ್ತು.
ಮನೆಯಲ್ಲಿ ನಾನು, ನನ್ನಲ್ಲೀಮನೆ
ಹರಡಿಕೊಂಡು ಒಂದರೊಳಗೊಂದು
ಗಡಿಯಿಲ್ಲ ತಡೆಯಿಲ್ಲ.
ಈ ಬದುಕ ಪ್ರೀತಿಸುವುದೇ ಹೀಗೆ,
ದಿನಕ್ಕೊಂದು ಹೆಜ್ಜೆ ಹಾಕುತ್ತ.
In This House
In this house
I’m alone; I sit
in the room here, stand
in the room there, roam
around in the quadrangle,
like this, I fill
the entire house.
In the kitchen, hunger
lights the hearth;
flames flicker forth, things
boil, get cooked, and
desire spills over.
Inside showers, sinks, taps,
rests water, eager to flow;
while swinging memories,
the swing reaches out
to a time beyond.
In the cupboards, books galore,
full of plain letters; they
sit there, quiet,
not transcending the page.
In the silence, a houseful
of sounds! but still
this loneliness that won’t
leave you alone —
The silence that’s stuck to the
back, swings, talks, feeds
the dreams, and just
sits around with you.
On sleeping, it’s night;
it’s morning as one
wakes up — Time loses itself.
I’m in this house; the
house is within me – one
incessantly spreads
into the other,
no stop, no barrier;
the zest for life shows
like this – traversing
this day to the next.
(Translated by Chitra Panikkar with the poet)
ಆಗಳಿ ತಟ್ಟಿದ ಸದ್ದು
ಆಗಳಿ ತಟ್ಟಿದ ಸದ್ದು,
ಹೊರಗೂ… ಒಳಗೂ…
ಈಚೆಯಿಂದ ತೆರೆವ ಬಾಗಿಲ
ಆಚೆಯಿಂದ ತಳ್ಳಿ
ಒಳನ್ನುಗ್ಗಿದ ಕತ್ತಲು
ಬೆಳಕ ಬೀದಿಗೆಳೆದು
ರಸ್ತೆ ತುಂಬಾ ರಾದ್ಧಾಂತ…
ಒಳಹೊರಗೂ ಕತ್ತಲು ತುಂಬಿದಾಗ
ಕಮ್ಮಗೆ ಕಂಬಳಿ ಹೊದ್ದು ಮಲಗಿದವರಿಗೆ
ಕತ್ತಲ ಕೌದಿಯಡಿ ಹರಿವ ನೆತ್ತರ ಬಣ್ಣ ಕಾಣುವುದೇಯಿಲ್ಲ
ಆಗಾಗ ಕೇಳುತ್ತಿದ್ದ ಆಗಳಿ ತಟ್ಟಿದ ಸದ್ದು
ಈಗ ಎಲ್ಲೆಲ್ಲೂ ಕೇಳುತ್ತಿದೆ!
[28 ಆಗಸ್ಟ್ 2018 ರಂದು ಬಹುತ್ವವನ್ನು, ಜಾತ್ಯತೀತತೆಯನ್ನು ಹಾಗೂ
ಸಮಾನತೆಯನ್ನು ಪ್ರತಿಪಾದಿಸಿದ ಐದು ಜನ ಬುದ್ಧಿ ಜೀವಿಗಳನ್ನು
ಬಲಪಂಥೀಯ ಸರ್ಕಾರವು ನಗರ ನಕ್ಸಲರೆಂದು ದೂರಿ ಬಂಧಿಸಿತು. ಈ ಘಟನೆಗೆ
ಸ್ಪಂದಿಸಿ ಬಂದ ಕವಿತೆಯಿದು]
Knock on the door
Knock on the door
from outside, from inside
Door that opens from this side is
pushed forcefully from that side.
Darkness barges in,
drags the lights on the streets
anarchy, turmoil, an utter chaos..!
when darkness spreads the inside out;
those that sleep under their cozy
concealed blankets
never see the RED of the blood
seeping under their dark sheaths
knocks, not so frequent
are now heard often from all sides!
(Translated from Kannada by the poet)
(This poem came as a response to the arrest of five activists in India on the 28 Aug 2018. They were blamed by the State as ‘urban naxals’)
ಹೀಗೊಂದು ಪುಟ್ಟ ಮೈ
ಹೀಗೊಂದು ಪುಟ್ಟ ಮೈ, ಮೈಯೊಳಗೆ ಮನಸು
ಮನಸಿಗೊಂದು ಹೃದಯ.
ಮನಸ ಮಯ್ಯಿಗೂ, ಮಯ್ಯ ಮನಸಿಗೂ
ನಂಟೇನಾದರು ಇದೆಯಾ?
ಒಂದೇ ಅನಿಸಿದರು ಬೇರೆ ಬೇರೆ ಜಗದಲ್ಲಿ ಅಲೆವಹಾಗೆ
ಜೊತೆಯಲಿದ್ದರೂ ಎಲ್ಲೋ ಇರುತ್ತವೆ ದೂರವಿದ್ದಹಾಗೆ
ಮಯ್ಯಿ ಮಾಯೆಯೋ, ಮನಸು ಮಾಯೆಯೋ
ಮಾಯವಾಗಿ ಹೃದಯ!
ಮಾಯೆಗೊಂದು ಮೈ, ಮಾಯೆಗೂ ಮನಸು
ಇದು ಮಾಯಾ ಹೃದಯ…
ಮನಸ ಮಯ್ಯಿಗೆ ರೆಕ್ಕೆ ಪುಕ್ಕ ಹಾರೋಕೆ ತೆರೆದ ಬಾನು!
ಮಯ್ಯ ಮನಸು ನೀರಾಗಿ ಕರಗಿದರು ಹರಿಯಲಾರದೇನು?
ನೂರು ಮಯ್ಯಿ ನೂರಾರು ಮನಸುಗಳ ಹಂಗು ಬಿಟ್ಟು ಹಾರಿ
ಎಲ್ಲೋ ನೆನಪಿನಲಿ, ಉಸಿರ ಲಯದಲ್ಲಿ, ಹಗಲ ಇರುಳಲ್ಲಿ,
ಅಳಿದು, ಉಳಿದು, ಇನ್ನೆಲೋ ಸುಳಿಯುವುದು…
ಸ್ತಬ್ಧ ಮಯ್ಯಿ ನಿಃಶಬ್ದ ಮನಸು ಲಯಬದ್ದ ಮಿಡಿಯೊ ಹೃದಯ.
Like this a petite body
Like this a petite body, inside the body a mind
The mind contains a heart.
Body of the mind and mind of the body
Is there a link between the two?
Though identical, they roam the worlds unalike
Though together, they remain far apart
Is body a maaya or maaya the mind
maaya is illusion – the fading heart!
Maaya has a body, maaya has a mind
This is the maaya heart…
Mind’s body has wings and an expanse of sky to fly!
Body’s mind though melts, to flow it simply shies?
Detached from bodies, detached from minds,
Lingers in memory, rhymes in breathing, as darkness in day light
Perishes, persists,
transcends to elsewhere…
This stagnant body, silent mind, and steadily beating heart.
(Translated from Kannada by the poet)
ಅವಕಾಶ
ಹೆಜ್ಜೆ ಗುರುತೂ ಹೊತ್ತು ಹೊರಟುಹೋದವರ ಹದಿ ಕಾಯಬೇಕೆ?
ಗ್ರಿಷ್ಮಕ್ಕೆ ಒಣಗಿದೆಲೆಗಳು ಉದುರಿ
ಎಷ್ಟೊಂದು ಕಸ ಮರದ ಕಾಲಬುಡಕ್ಕೆ,
ಇಷ್ಟು ದಿನ ಅಂಟಿಕೊಂಡಿದ್ದೆಲ್ಲಾ
ಅಂಗಳದ ತುಂಬ ಸರಬರ ಮಾಡಿಕೊಂಡಿವೆ.
ಎತ್ತರಕ್ಕೆ ಬೋಳು ಬೋಳಾಗಿ ನಿಂತರೂ,
ಬೇಕಿದ್ದಷ್ಟು ಮಾತ್ರವೇ ಉಳಿಸಿಕೊಂಡು
ಹೊಸ ಚಿಗುರೊಡೆಯುವ ಸೊಗಸು
ಮರಕ್ಕೆ ಮಾತ್ರವೇ ಗೊತ್ತು.
ಈಗ ಆಕಾಶ ಕೊಂಚ ಹತ್ತಿರವಾದಂತೆ ಅನ್ನಿಸುತ್ತಿದೆ.
Tree
Must we wait for those who have left only their footprints?
Shuffled leaves
fallen to the roots of a tree.
A leaf sloughed and then another leaf, a day
shed, dry rustle,
unstuck matter
scattered in the front yard.
Happy skinned branches,
their bristles coming.
Only the tree knows the crisp joy
of its new shoots.
And that the sky is near.
(English version by Nia Davies)